ಬಂಟ್ವಾಳ : ಚೇತನ್ ಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು, ಅದು ಇನ್ನೊಬ್ಬರಿಗೆ ಭಯ ಹುಟ್ಟಿಸುವಂತಿರಬೇಕು – ಖಾದರ್

Advertisement

ಬಂಟ್ವಾಳ, ಜು. 17 : ಪಾಪಿ ಹಂತಕ ಚೇತನ್ ದುಷ್ಕೃತ್ಯಕ್ಕೆ ಬಲಿಯಾದ ಮುಗ್ಧ ಹೆಣ್ಣು ಮಗಳು ಲಾವಣ್ಯಳಿಗೆ ಸಚಿವ ಯುಟಿ ಖಾದರ್ ಅಂತಿಮ ನಮನ ಸಲ್ಲಿಸಿದ್ದಾರೆ.

Advertisement

ಬಳಿಕ ಮಾತನಾಡಿದ ಖಾದರ್ ಅವರು, ಲಾವಣ್ಯ ಎಂಬ ಸೋದರಿಯನ್ನು ಹತ್ಯೆ ಮಾಡಿರುವುದು ತುಂಬಾ ನೋವಾಗಿದೆ. ನಾವೆಷ್ಟು ಸಂತಾಪ ಸೂಚಿಸಿದರೂ, ಪರಿಹಾರ ನೀಡಿದರೂ ಆಕೆಯ ತಂದೆ ತಾಯಿ, ಸೋದರ ಸೋದರಿಯರಿಗೆ, ಬಂಧುಮಿತ್ರರ ನೋವನ್ನು ತೊಡೆಯಲು ಸಾಧ್ಯವಿಲ್ಲ. ಇಂತಹ ದುಷ್ಕೃತ್ಯಗಳು ಇಲ್ಲಿಗೆ ಅಂತ್ಯವಾಗಬೇಕು. ಇಂತಹ ವಿಕೃತ ಮನಸುಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು, ಅದು ಮತ್ತೊಬ್ಬರಿಗೆ ಭಯವನ್ನು ಹುಟ್ಟಿಸುವಂತಿರಬೇಕು ಎಂದು ಆಗ್ರಹಿಸಿದರು.

Advertisement

ಆ ಕುಟುಂಬದೊಂದಿಗೆ ನಾವೆಲ್ಲಾ ಇದ್ದೇವೆ. ಆ ಹೆಣ್ಣುಮಗಳ ಆತ್ಮಕೆ ಶಾಂತಿ ಸಿಗಲಿ, ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ