ಬೆಳ್ತಂಗಡಿ, ಆ. 29 : ಕನ್ನಾಜೆಯಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಮಹೋತ್ಸವವು ಆ. 28ರಂದು ಅತ್ಯಂತ ವೈಭವದಿಂದ ಜರುಗಿತು.

ಪೂಜಾ ಮಹೋತ್ಸವದ ವಿಶೇಷ ಅಂಗವಾಗಿ ಉದ್ಯಮಿ ಶ್ರೀ ಶಶಿಧರ್ ಶೆಟ್ಟಿ ಬರೋಡಾ ಅವರು ತಮ್ಮ ಮಾತೃಶ್ರೀ ಶ್ರೀಮತಿ ಕಾಶಿ ಶೆಟ್ಟಿ ಅವರ ದಿವ್ಯ ಸ್ಮರಣಾರ್ಥವಾಗಿ ಆಗಮಿಸಿದ ಮಹಿಳೆಯರಿಗೆ ಜಗದೀಶ್ ಕನ್ನಾಜೆ ಇವರ ಸಹಕಾರದೊಂದೊಂದಿಗೆ ವಸ್ತ್ರದಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜಗದೀಶ್ ಕನ್ನಾಜೆ ವಹಿಸಿ, ವಾರಮಹಾಲಕ್ಷ್ಮೀ ಹಬ್ಬವು ನಾಡಿನೆಲ್ಲೆಡೆ ಸಂಭ್ರಮವನ್ನು ತಂದಿದೆ. ಈ ಹಬ್ಬದ ಮೂಲಕ ದೇಶ ಸೇವೆಯ ಪ್ರತಿಜ್ಞೆ ಮಾಡೋಣ ಎಂದರು.
ಬಳಿಕ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿಯವರು ಮಾತನಾಡಿ, “ಸಹೃದಯಿ ಬಂಧು, ಶ್ರೀ ಶಶಿಧರ್ ಶೆಟ್ಟಿ ಬರೋಡಾ ಅವರ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಭಗವಂತನು ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಈ ಸುಸಂದರ್ಭದಲ್ಲಿ ಶ್ರೀಮತಿ ಕಾಶಿ ಶೆಟ್ಟಿ ಅವರ ಸ್ಮರಣೆಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಧರ್ಮದರ್ಶಿಗಳು, ಭಜನ ಮಂಡಳಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಉಪಸ್ಥಿತರಿದ್ದರು. ನೂರಾರು ಭಕ್ತಾದಿಗಳು ಮಹಾಪೂಜೆಯ ಪ್ರಸಾದ ಸ್ವೀಕರಿಸಿದರು. ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.




