ವೇಣೂರು : ಬಳಂಜ ಮಂಡಲ ವತಿಯಿಂದ  ನಡೆಯಲಿರುವ ಹಿಂದೂಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ವೇಣೂರು, ಜ. 14 : ಹಿಂದೂ ಸಂಗಮ ಆಯೋಜನಾ ಸಮಿತಿ, ವೇಣೂರು ತಾಲೂಕು, ಬಳಂಜ ಮಂಡಲ ವತಿಯಿಂದ “ನಾನು ಹಿಂದು ನಮ್ಮದು ಹಿಂದೂ ರಾಷ್ಟ್ರ” ಎಂಬ ಧ್ಯೇಯ ವಾಕ್ಯದೊಂದಿಗೆ ಜ. 25 ರಂದು ವೇಣೂರಿನಲ್ಲಿ ನಡೆಯಲಿರುವ ಹಿಂದೂಸಂಗಮ ಶೋಭಾಯಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

Advertisement


ಹಿಂದೂ ಸಂಗಮ ಬಳಂಜ ಮಂಡಲ ಆಮಂತ್ರಣ ಪತ್ರಿಕೆಯನ್ನು ಶ್ರೀ ಕೆ. ವಸಂತ ಸಾಲ್ಯಾನ್ ಕಾಪಿನಡ್ಕ, ಸದಾನಂದ ಉಂಗಿಲಬೈಲು, ಸುಧೀರ್ ಸುವರ್ಣ, ನವೀನ್ ಸಾಮಾನಿ, ನಿತ್ಯಾನಂದ ನೊಚ್ಚ, ಸಂತೋಷ್ ಕಾಪಿನಡ್ಕ, ಶ್ರೀನಿವಾಸ ರೈ ಕಾರಂದೂರು, ರಾಘವೇಂದ್ರ ಭಟ್, ಪ್ರಶಾಂತ್ ಕರಂಬಾರು,  ರಮೇಶ್ ಬಜನೋಡಿ, ವಿದ್ಯಾನಂದ ಲೀಲಾವತಿ, ಪ್ರಕಾಶ್ ಆಚಾರ್ಯ, ರಕ್ಷಿತ್ ಕರಂಬಾರು, ಸೋಮನಾಥ ಶಿರ್ಲಾಲು ಸೇರಿದಂತೆ ಮತ್ತಿತ್ತರ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.



ಇನ್ನು, ಜ. 25 ಆದಿತ್ಯವಾರದಂದು ಅಪರಾಹ್ನ 2.30ರಿಂದ ಗುಂಡೇರಿ ಆವರಣದಿಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ಹಾಗೂ  ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಶ್ರೀ ಶೀತಲ್ ಜೈನ್, ಅಮೃತ ನಿವಾಸ ಶಿರ್ಲಾಲು ಇವರು ವಹಿಸಿಕೊಳ್ಳಲಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.