ಬೆಳ್ತಂಗಡಿ, ಏ. 13 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಪ್ರಥಮ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ ದಾಖಲಿಸುವ ಮೂಲಕ ವಿದ್ಯಾರ್ಥಿಗಳು ಅಮೋಘ ಸಾಧನೆ ತೋರಿದ್ದಾರೆ.
ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಿಂದ ಒಟ್ಟು 154 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 28 ಮಂದಿ ವಿದ್ಯಾರ್ಥಿಗಳು ಶೇ.95 ಕ್ಕಿಂತ ಅಧಿಕ ಹಾಗೂ 74 ವಿದ್ಯಾರ್ಥಿಗಳು ಶೇ.90 ಕ್ಕಿಂತ ಅಧಿಕ ಫಲಿತಾಂಶ ದಾಖಲಿಸಿದ್ದಾರೆ. 102 ಮಂದಿ ಅತ್ಯುನ್ನತ ಶ್ರೇಣಿ ಹಾಗೂ 38 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವುಗಳಲ್ಲಿ 66 ಮಂದಿ ವಿದ್ಯಾರ್ಥಿಗಳು ಭಾಷಾವಾರು 100 ಕ್ಕೆ 100 ಅಂಕ ಪಡೆಯುವ ಮೂಲಕ ಪ್ರಥಮ ಪ್ರಯತ್ನದಲ್ಲೇ ವಿಶೇಷ ಸಾಧನೆ ತೋರಿದ್ದಾರೆ.
ವಿಜ್ಞಾನ ವಿಭಾಗ :
ವಿಜ್ಞಾನ ವಿಭಾಗದಲ್ಲಿ ತನುಶ್ರೀ (593) ಅಂಕ ಗಳಿಸಿ ರಾಜ್ಯದಲ್ಲಿ 7 ಸ್ಥಾನ ಹಾಗೂ (ರಸಾಯನಶಾಸ್ತ್ರ-100, ಭೌತಶಾಸ್ತ್ರ-100 ಗಣಿತಶಾಸ್ತ್ರ-100, ಜೀವಶಾಸ್ತ್ರ-100), ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಚಿನ್ಮಯ್ ಜಿ.ಕೆ.(589) ಅಂಕ (ಭೌತಶಾಸ್ತ್ರ-100, ರಸಾಯನಶಾಸ್ತ್ರ-100, ಗಣಿತ-100 ಮತ್ತು ಗಣಕ ವಿಜ್ಞಾನ-100) ಪಡೆದು ದ್ವಿತೀಯ, ದೇವಿಪ್ರಸಾದ್ ಶೆಣೈ (586) ಅಂಕ ಭೌತಶಾಸ್ತ್ರ-100, ಗಣಿತ-100, ಜೀವಶಾಸ್ತ್ರ-100 ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.
ವಾಣಿಜ್ಯ ವಿಭಾಗ :
ವಾಣಿಜ್ಯ ವಿಭಾಗದಲ್ಲಿ ಧ್ಯಾನ (590) ಅಂಕ (ಕನ್ನಡ-100, ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100) ಪಡೆಯುವ ಮೂಲಕ ಪ್ರಥಮ ಸ್ಥಾನಿಯಾಗಿದ್ದು, ರಿಷಾಂತ್ ವೈ.ಪಿ. (581), ದ್ವಿತೀಯ ಸ್ಥಾನಿಯಾಗಿದ್ದು, ಶಾನ್ ಹರ್ವಿನ್ ಫೆರ್ನಾಂಡಿಸ್ (580) ತೃತೀಯ ಸ್ಥಾನ ಪಡೆದಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳು ಜೆಇಇ ಮೇನ್ಸ್ -2026 ಪ್ರಥಮ ಹಂತದಲ್ಲಿ ಶೇ. 99 ಅಂಕ ಪಡೆದಿದ್ದು, ಇದೀಗ ಬೋರ್ಡ್ ಪರೀಕ್ಷೆಯಲ್ಲೂ ಉತ್ತಮ ಸಾಧನೆ ತೋರಿರುವುದು ನಮ್ಮ ನಿರೀಕ್ಷೆಗೂ ಮೀರಿದ ಗೆಲುವು ಎಂದು ವಿದ್ವತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಜ್ಞಾನ ವಿಭಾಗ
1) ತನುಶ್ರೀ (593)-ಶೇ.98.83
2) ಚಿನ್ಮಯ್ ಜಿ.ಕೆ. (589)- ಶೇ.98.17%
3) ಕೆ.ದೇವಿಪ್ರಸಾದ್ ಶೆಣೈ-(586)-ಶೇ.97.67%
4) ಅಜೀತ್ ಎಚ್.ಸಿ. (584)-ಶೇ.97.33%
5) ಜಿ.ಎಸ್.ರಾಹುಲ್ (584) -ಶೇ.97.33%
6) ಮನೀಶ್ ಡಿ. (584) -ಶೇ.97.33%
7) ಮನೋಜ್ ಎಚ್.ಕೆ. (584) -ಶೇ.97.33%
8) ಪ್ರತೀಕ್ ವಿ.ಎಸ್. (584)- ಶೇ.97.33%
9) ಸಂಪತ್ ಕುಮಾರ್ ಪುಟ್ಟಿ (584)- ಶೇ.97.33%
10) ಭುವನ್ ತೇಜ್ ಎಸ್.ಎನ್. (582) – ಶೇ.97.00%
11) ಸಿಮ್ರಾ ಪರ್ವೀನ್ (582) – ಶೇ.97.00%
12) ಸನತ್ ಎಸ್.ಎಸ್. (581)-ಶೇ.96.83%
13) ಆದಿತ್ಯ ಪಿ. (580) ಶೇ.96.67%
14) ಜ್ಞಾನೇಶ್ ಕುಮಾರ್ ಬಿ.ಎಸ್. (580)-ಶೇ.96.67%
15) ಸೃಷ್ಠಿ ಎಸ್. (580)- ಶೇ.96.67%
ವಾಣಿಜ್ಯ ವಿಭಾಗ
1) ಧ್ಯಾನ ಎಸ್.(590)- ಶೇ.98.33%
2) ರಿಷ್ಯಂತ್ ವೈ.ಪಿ. (581)- ಶೇ.96.83%
3) ಶಾನ್ ಹೆರ್ವಿನ್ ಫರ್ನಾಂಡೀಸ್ (580)-ಶೇ.580
4) ಪೂಜಿತ್ (574)-ಶೇ.95.67%
5) ನೇಹಾ ಭಟ್ (573) -ಶೇ.95.50%

