ಪಶ್ಚಿಮ ಬಂಗಾಳ : ದೀದಿ ಕೋಟೆಯಲ್ಲಿ ಕಮಲದ ಅಬ್ಬರ – ಮತದಾರರ ಒಲವು ಬಿಜೆಪಿಗೆ ?

ಕೋಲ್ಕತ್ತ, ಮಾ. 04 : ಏಪ್ರಿಲ್ / ಮೇ ತಿಂಗಳಲ್ಲಿ ನಡೆಯಬೇಕಾಗಿರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಾರ್ಟಿಗೆ ಮುನ್ನಡೆ ಸಿಗಬಹುದು, ಮತದಾರನ ನಾಡಿಮಿಡಿತ ಹೇಗಿದೆ ಎನ್ನುವುದರ ಬಗ್ಗೆ ಒಪಿನಿಯನ್ ಪೋಲ್’ಒಂದು ಹೊರಬಿದ್ದಿದೆ. ಇದರ ಫಲಿತಾಂಶದ ಪ್ರಕಾರ, ಬಿಜೆಪಿ ನೇತೃತ್ವದ NDA ಮೈತ್ರಿಕೂಟಕ್ಕೆ ಮುನ್ನಡೆಯಾಗುವ ಸಾಧ್ಯತೆಯಿದೆ.

Advertisement

ಜಿದ್ದಾಜಿದ್ದಿನ ಹಣಾಹಣಿಗೆ ಹೆಸರಾಗಿರುವ ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆ ಸಂಬಂಧ ಜನ್ ಲೋಕ್’ಪಾಲ್ ನಡೆಸಿದ ಸಮೀಕ್ಷೆಯ ಪ್ರಕಾರ, ಬಿಜೆಪಿಗೆ ಮುನ್ನಡೆ ಸಿಗಬಹುದು. ಆದರೆ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ (TMC) ತೀರಾ ಹಿಂದೆ ಏನೂ ಉಳಿಯುವುದಿಲ್ಲ ಎನ್ನುವ ಫಲಿತಾಂಶ ಈ ಸರ್ವೇಯಲ್ಲಿ ಬಂದಿದೆ.

ಪಶ್ಚಿಮ ಬಂಗಾಳ, ಮತದಾರರ ಅಂತಿಮ ಪಟ್ಟಿ ಬಿಡುಗಡೆ


ವಿಶೇಷ ತೀವ್ರ ಪರಿಷ್ಕರಣೆಯ ವಿಚಾರದಲ್ಲಿ, ನರೇಂದ್ರ ಮೋದಿ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗದ ಹಿಂದೆ ಬಿದ್ದಿರುವ ಮಮತಾ ಬ್ಯಾನರ್ಜಿ, ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಆಯೋಗ, ಫೈನಲ್ ವೋಟರ್ ಲಿಸ್ಟ್’ಅನ್ನು ಬಿಡುಗಡೆ ಮಾಡಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಒಟ್ಟಾರೆಯಾಗಿ ಈ ಎಸ್ಐಆರ್ (SIR Process) ಪ್ರಕ್ರಿಯೆಯಲ್ಲಿ 63,66,952 ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. ಒಟ್ಟಾರೆಯಾಗಿ, 7,08,16,630 ಕೋಟಿ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ. ಪರಿಷ್ಕ್ರತ ಮತದಾರರ ಪಟ್ಟಿಯನ್ನು ಎಲ್ಲಾ ಪೋಲಿಂಗ್ ಬೂತ್’ನಲ್ಲಿ ಹಾಕಲಾಗುವುದು ಎಂದು ಆಯೋಗ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಸರಳ ಬಹುಮತಕ್ಕೆ ಬೇಕು 148 ಸ್ಥಾನ

294 ವಿಧಾನಸಭಾ ಸ್ಥಾನವನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ, ಸರಳ ಬಹುಮತಕ್ಕೆ 148 ಸ್ಥಾನಗಳು ಬೇಕು. ಈಗ ಜನ್ ಲೋಕ್’ಪಾಲ್ ಪ್ರಕಟಿಸಿರುವ ಸಮೀಕ್ಷೆಯ ಪ್ರಕಾರ, ಬಿಜೆಪಿಯು ಜಸ್ಟ್ ಸರಳ ಬಹುಮತದ ನಂಬರ್ ಅನ್ನು ದಾಟಬಹುದು. ಒಂದು ವೇಳೆ, ಈ ಒಪಿನಿಯಲ್ ಪೋಲ್ ನಿಜವಾಗಿದ್ದಲ್ಲಿ, ಇತರರ ಸಹಕಾರ ಅತ್ಯಗತ್ಯವಾಗಿರಲಿದೆ.

ಒಪಿನಿಯಲ್ ಪೋಲ್’ಪ್ರಕಾರ ಯಾರಿಗೆ ಎಷ್ಟು ಸೀಟ್?
ಒಟ್ಟು ಸ್ಥಾನಗಳು : 294
ಸರಳ ಬಹುಮತಕ್ಕೆ : 148
ಬಿಜೆಪಿ ಮೈತ್ರಿಕೂಟ : 144-149
ಟಿಎಂಸಿ : 135-140
ಇತರರು : 8-12

2021ರ ಚುನಾವಣೆಯಲ್ಲಿ ಏನು ಫಲಿತಾಂಶ ಬಂದಿತ್ತು?
ಒಟ್ಟು ಸ್ಥಾನಗಳು : 294
ಟಿಎಂಸಿ : 215
ಬಿಜೆಪಿ : 77
ಜಿಜೆಎಂ (ಟಿ) : 01
ಐಎಸ್ಎಫ್ : 01

ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದಲ್ಲಿ ಭರ್ಜರಿಯಾಗಿ ತಳವೂರಿದ್ದ ಎಡಪಕ್ಷಗಳು, ಐದು ವರ್ಷದ ಹಿಂದಿನ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗೆಲ್ಲಲಾಗದೇ ತೀವ್ರ ಮುಖಭಂಗವನ್ನು ಎದುರಿಸಿದ್ದವು. ಕೇಂದ್ರ ಚುನಾವಣಾ ಆಯೋಗ, ಏಪ್ರಿಲ್ ಮಧ್ಯ ಭಾಗದಲ್ಲಿ ಅಥವಾ ಮಾಸಾಂತ್ಯದಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ, ನಾಲ್ಕು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ, ಚುನಾವಣೆಯನ್ನು ನಡೆಸಬಹುದು ಎಂದು ಹೇಳಲಾಗುತ್ತಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.