ವಾಷಿಂಗ್ಟನ್ : ಪವರ್‌ ಹೌಸ್ ಶ್ವೇತಭವನದ ಬಳಿ ಮತ್ತೆ ಗುಂಡಿನ ದಾಳಿ – ಶೂಟೌಟ್ ನಲ್ಲಿ ಬಂದೂಕುಧಾರಿ ಸಾವು !

ವಾಷಿಂಗ್ಟನ್, ಮೇ 24 : ಅಮೆರಿಕಾದ ಪವರ್‌ ಹೌಸ್ ಶ್ವೇತಭವನದ ಬಳಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದ್ದು, ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ(ಮೇ.23) ಸಂಜೆ ವೇಳೆಗೆ ಶ್ವೇತಭವನದ ಭದ್ರತಾ ತಪಾಸಣಾ ಕೇಂದ್ರವನ್ನು ಸಮೀಪಿಸಿ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ನಡೆದ ಶೂಟೌಟ್‌ನಲ್ಲಿ ಬಂದೂಕುಧಾರಿ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯವಾಗಿದೆ ಎಂದು ಫೆಡರಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈ ಕುರಿತು ಯುಎಸ್ ಸೀಕ್ರೆಟ್ ಸರ್ವಿಸ್ ವಕ್ತಾರರು ನೀಡಿದ ಹೇಳಿಕೆ ಪ್ರಕಾರ, ಶನಿವಾರ(ಮೇ.23) ಸಂಜೆ 6 ಗಂಟೆಯ ಸುಮಾರಿಗೆ ಸಂಕೀರ್ಣದಲ್ಲಿ ತನ್ನ ಬ್ಯಾಗ್‌ನಿಂದ ಆಯುಧವನ್ನು ತೆಗೆದು ಏಕಾಏಕಿ ಅಲ್ಲಿ ನಿಯೋಜಿಸಲಾಗಿದ್ದ ಗುಪ್ತಚರದಳದ ಭದ್ರತಾ ಅಧಿಕಾರಿಗಳ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾನೆ. ಈ ವೇಳೆ ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು ಗುಂಡನ್ನು ಹಾರಿಸಿದ್ದು, ಗುಂಡಿನ ಚಕಮಕಿಗೆ ಕಾರಣವಾಗಿದೆ.

ಈ ವೇಳೆ, ಅಧಿಕಾರಿಗಳು ಬಂದೂಕುಧಾರಿಗೆ ಗುಂಡು ಹಾರಿಸಿದ್ದು, ಬಳಿಕ ಆತನನ್ನು ಅಲ್ಲಿಂದ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಬಳಿಕ ಆತ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನು, ಈ ಶೂಟೌಟ್‌ ಸಮಯದಲ್ಲಿ ಬಂದೂಕುಧಾರಿಯ ಗುಂಡಿನಿಂದಾಗಿ ಒಬ್ಬ ಅಧಿಕಾರಿಗೆ ಗಾಯವಾಗಿದ್ದು, ಇದರ ಜೊತೆಗೆ ಈ ರಸ್ತೆಯ ಸಮೀಪದಲ್ಲೇ ಇದ್ದ ಟ್ರಕ್‌ ಡ್ರೈವರ್‌ ಒಬ್ಬರಿಗೆ ಗಾಯವಾಗಿದೆ. ಆದಾಗ್ಯೂ, ಟ್ರಕ್‌ ಡ್ರೈವರ್‌ಗೆ ತಗುಲಿದ ಗುಂಡು ಶಂಕಿತ ವ್ಯಕ್ತಿ ಹಾರಿಸಿದ ಗುಂಡುಗಳೇ ಅಥವಾ ಅಧಿಕಾರಿಗಳ ಗುಂಡುಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಂಪ್‌ ಸೇಫ್‌, ವೈಟ್‌ ಸುತ್ತಲಿನ ಭದ್ರತೆ ಹೆಚ್ಚಳ

ಇನ್ನು, ಈ ಘಟನೆ ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉಪಸ್ಥಿತರಿದ್ದು, ಹಿರಿಯ ಸಹಾಯಕರೊಂದಿಗೆ ವಾರಾಂತ್ಯದಲ್ಲಿ ಇರಾನ್‌ನೊಂದಿಗಿನ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಶಾಂತಿ ಒಪ್ಪಂದದ ಮಾತುಕತೆಯ ಕುರಿತು ಚರ್ಚೆ ನಡೆಸುವ ವೇಳೆ ನಡೆದಿದೆ. ಆದಾಗ್ಯೂ, ಈ ದಾಳಿಯು ಅವರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದ್ದಾರೆ.

ಈ ಘಟನೆಯ ಸುತ್ತಲಿನ ಸನ್ನಿವೇಶಗಳು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಈ ದಾಳಿಯ ಸಮಯದಲ್ಲಿ ಅಲರ್ಟ್‌ ಆದ ಭದ್ರತಾ ಅಧಿಕಾರಿಗಳು ವೈಟ್‌ಹೌಸ್‌ ಉತ್ತರ ಲೇನ್‌ನ ಶ್ವೇತಭವನದ ಪತ್ರಿಕಾ ದಳದ ಸದಸ್ಯರನ್ನು ಶ್ವೇತಭವನದ ಬ್ರೀಫಿಂಗ್ ಕೋಣೆಗೆ ಸುರಕ್ಷಿತವಾಗಿ ಕರೆದೊಯ್ದಿದ್ದು, ಪತ್ರಿಕಾಗೋಷ್ಠಿ ಕೊಠಡಿಯನ್ನು ನಿರ್ಬಂಧಿಸಿದ್ದಾರೆ. ಗುಂಡಿನ ದಾಳಿ ಹಿನ್ನಲೆಯಲ್ಲಿ ಸುರಕ್ಷತಾ ಕ್ರಮವಾಗಿ ವೈಟ್‌ಹೌಸ್‌ ಸಂಕೀರ್ಣದಲ್ಲಿ ಕೆಲಹೊತ್ತು ಲಾಕ್‌ಡೌನ್‌ ಮಾಡಲಾಗಿದ್ದು, ಬಳಿಕ ಸಂಜೆ 6:45ರ ಬಳಿಕ ಇದನ್ನು ತೆರವುಗೊಳಿಸಲಾಗಿದೆ. ಆದಾಗ್ಯೂ, ಭದ್ರತೆಯ ದೃಷ್ಟಿಯಿಂದ ವೈಟ್‌ಹೌಸ್‌ ಕಟ್ಟಡದ ಮೇಲ್ಭಾಗದಲ್ಲಿ ರಹಸ್ಯ ಸೇವಾ ಸ್ನೈಪರ್ ತಂಡಗಳನ್ನು ಸಹ ನಿಯೋಜಿಸಲಾಗಿದ್ದು, ಘಟನಾ ಸ್ಥಳದಲ್ಲಿ ಎಫ್‌ಬಿಐ ರಹಸ್ಯ ಸೇವೆಗೆ ಸಹಾಯ ಮಾಡುತ್ತಿದೆ ಎಂದು FBI ನಿರ್ದೇಕ ಕಾಶ್ ಪಟೇಲ್ ತಿಳಿಸಿರುವುದಾಗಿ ವರದಿಯಾಗಿದೆ.

ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಇನ್ನು, ಈ ಘಟನೆ ಕುರಿತು ಸ್ಥಳದಲ್ಲೇ ಇದ್ದ ಸಿಬಿಎಸ್ ನ್ಯೂಸ್ ವೈಟ್ ಹೌಸ್‌ನ ಸಹ ನಿರ್ಮಾಪಕಿ ಎಮ್ಮಾ ನಿಕೋಲ್ಸನ್ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಸಿಬಿಎಸ್ ನ್ಯೂಸ್ ಸಿಬ್ಬಂದಿ ʼಸಿಬಿಎಸ್ ವೀಕೆಂಡ್ ನ್ಯೂಸ್ʼ ಗಾಗಿ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದ್ದಾಗ, ಶ್ವೇತಭವನದ ಬಳಿ ಬಹು ಗುಂಡೇಟಿನ ಶಬ್ದ ಕೇಳಿಬಂದಿದ್ದು ಬರೋಬ್ಬರಿ 20 ಸುತ್ತಿನ ಗುಂಡುಗಳು ಹಾರಿಸಲಾಗಿದೆ. ತಕ್ಷಣವೇ ರಕ್ಷಣೆ ಪಡೆಯಲು ಮುಂದಾದೆವು, ಬಳಿಕ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಸಿಬ್ಬಂದಿಯನ್ನು ಶ್ವೇತಭವನಕ್ಕೆ ಕರೆದೊಯ್ದಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಸೈಕೋ ಕಿಲ್ಲರ್ ಚೇತನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ – ಬಂಟ್ವಾಳ ಪೊಲೀಸರ ವಶಕ್ಕೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ಲೇ ಸ್ಕೂಲ್‌ನಲ್ಲಿ ಚಡ್ಡಿಯಲ್ಲೇ ಮೂತ್ರ ವಿಸರ್ಜನೆ – 5 ವರ್ಷದ ಮಗುವಿನ ಖಾಸಗಿ ಅಂಗವನ್ನೇ ಸುಟ್ಟ ಶಿಕ್ಷಕಿ !

ಕರಾವಳಿ, ಟಾಪ್ ಸುದ್ದಿಗಳು

ಕಾರ್ಕಳ : ಅನಾರೋಗ್ಯದಿಂದ ಬಳಲುತ್ತಿರುವ ಅವಿನಾಶ್ ಪೂಜಾರಿಗೆ “ವಿಠೋಬ ರುಕ್ಮಾಯಿ ಭಜನಾ ಮಂಡಳಿ ಹಿರ್ಗಾನ” ನೆರವು

⚠️ Contents are protected on this website.