ರಿಟೆನ್ಶನ್ ನಲ್ಲಿ ಸ್ಟಾರ್ ಆಟಗಾರ್ತಿಯರನ್ನು ಉಳಿಸಿಕೊಂಡ ಆರ್ ಸಿಬಿ

Advertisement

WPL : WPLನಲ್ಲಿ 2026 ತಂಡಗಳು ಹೇಗಿರಲಿದೆ ? ನಮ್ಮ ಆರ್ ಸಿಬಿ ತಂಡದಲ್ಲಿ ಯಾರು ಇರಲಿದ್ದಾರೆ ? ಹೀಗೆ ನೂರಾರು ಮಾತುಕತೆಗಳು ಕ್ರೀಡಾಭಿಮಾನಿಗಳಲ್ಲಿ ಇತ್ತು. ಆದರೀಗ ರಿಟೆನ್ಶನ್ ಟೆನ್ಶನ್ ಸ್ವಲ್ಪ ಮಟ್ಟಿಗೆ ಅಂತ್ಯ ಕಂಡಿದೆ. ಸದ್ಯ ಎಲ್ಲರ ಚಿತ್ತ ಇರುವುದು ನವೆಂಬರ್ 27ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯ ಕಡೆಗೆ. ರಿಟೆನ್ಶನ್ ನಲ್ಲಿ ಈ ಬಾರಿ ಬಹುತೇಕ ಎಲ್ಲಾ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನೇ ಕೈ ಬಿಟ್ಟಿರುವುದು ಹರಾಜು ಪ್ರಕ್ರಿಯೆಯ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಕ್ಕೆ ಕೂಡಾ ಜೇಬಿನಲ್ಲಿರುವ 6.15 ಕೋಟಿ ರುಪಾಯಿಯಲ್ಲಿ 14 ಆಟಗಾರ್ತಿಯರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದ್ದು, ಬಲಿಷ್ಠ ಆಟಗಾರ್ತಿಯರನ್ನೇ ಖರೀದಿಸುವ ನಿರೀಕ್ಷೆಯಿದೆ.

Advertisement

ಆರ್ ಸಿಬಿ ತಂಡ ತನ್ನ ತೆಕ್ಕೆಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ, ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಶ್, ಕರ್ನಾಟಕದ ಸ್ಪಿನ್ ಮಾಂತ್ರಿಕೆ ಶ್ರೇಯಾಂಕ ಪಾಟೀಲ್ ಹಾಗೂ ವಿದೇಶಿ ಆಟಗಾರರಾಗಿ ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿಯನ್ನು ಇರಿಸಿಕೊಂಡಿದೆ. ಈ ನಾಲ್ಕು ಆಟಗಾರರಿಗಾಗಿ ಆರ್ ಸಿಬಿ ಬರೋಬ್ಬರಿ 9.85 ಕೋಟಿ ರೂಪಾಯಿ ವ್ಯಯ ಮಾಡಿದೆ. ಇನ್ನುಳಿದಿರುವ 6.15 ಕೋಟಿಯಲ್ಲಿ 14 ಆಟಗಾರ್ತಿಯರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕಿದ್ದು 1 ಆರ್ ಟಿಎಂ ಅದರ ಬಳಿ ಇದೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ