ಹಿಮಾಚಲ ಪ್ರದೇಶ : ಎಮ್ಮೆಯೊಂದರ ಹೊಟ್ಟೆಯಲ್ಲಿತ್ತು ಬರೋಬ್ಬರಿ 66 ಚೂಪಾದ ಕಬ್ಬಿಣದ ವಸ್ತುಗಳು !

ಹಿಮಾಚಲ ಪ್ರದೇಶ, ಜು. 14 : ಎಮ್ಮೆಯೊಂದರ ಹೊಟ್ಟೆಯಲ್ಲಿ ಬರೋಬ್ಬರಿ 66 ಚೂಪಾದ ಕಬ್ಬಿಣದ ವಸ್ತುಗಳು ಪತ್ತೆಯಾದ ಆತಂಕಕಾರಿ ಘಟನೆ ವರದಿಯಾಗಿದೆ. ಹೀಗಾಗಿ, ಜಾನುವಾರುಗಳಿಗೆ ಮೇವು ಹಾಕುವ ಮುನ್ನ ಪರೀಕ್ಷಿಸಬೇಕಾದ ಅನಿವಾರ್ಯತೆಯಿದೆ.

Advertisement

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ, ಗಬ್ಬ ಹೊತ್ತಿದ್ದ ಎಮ್ಮೆಯೊಂದರ ಹೊಟ್ಟೆಯಲ್ಲಿದ್ದ ಬರೋಬ್ಬರಿ 66 ಚೂಪಾದ ಕಬ್ಬಿಣದ ವಸ್ತುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಪಶುವೈದ್ಯರ ತಂಡವೊಂದು ಮೂಕಪ್ರಾಣಿಯ ಜೀವ ಉಳಿಸಿದ ಅಪರೂಪದ ಘಟನೆ ಉನಾ ಜಿಲ್ಲೆಯ ಲಾಲ್ತಿಯಲ್ಲಿರುವ ಪಶು ಚಿಕಿತ್ಸಾಲಯದಲ್ಲಿ ನಡೆದಿದೆ.

ಹರೋಲಿ ತಾಲೂಕಿನ ಬರೇವಾಲ್ ಗ್ರಾಮದ ರೈತ ಕರ್ನೈಲ್ ಸಿಂಗ್ ಎಂಬುವವರಿಗೆ ಸೇರಿದ ಒಂಬತ್ತು ತಿಂಗಳ ತುಂಬಿದ್ದ ಎಮ್ಮೆ ಇದಾಗಿದ್ದು, ಕಳೆದ ಹತ್ತು ದಿನಗಳಿಂದ ಮೇವು ತಿನ್ನದೆ ಸಂಕಟ ಎದುರಿಸ್ತಾ ಇತ್ತು. ಇದರಿಂದ ಆತಂಕಗೊಂಡ ಮಾಲೀಕರು ಎಮ್ಮೆಯನ್ನು ಪಶು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಎಮ್ಮೆಯನ್ನು ಪರೀಕ್ಷಿಸಿದ ಪಶುವೈದ್ಯಾಧಿಕಾರಿ ಡಾ. ನಿಶಾಂತ್ ರಣಾವತ್ ಅವರು, ರಕ್ತದ ಪರೀಕ್ಷೆ ಮತ್ತು ಅಲ್ಮಾಸೌಂಡ್ ಸ್ಕ್ಯಾನಿಂಗ್ ನಡೆಸಿದಾಗ ಎಮ್ಮೆಯ ಹೊಟ್ಟೆಯಲ್ಲಿ ಭಾರಿ ಪ್ರಮಾಣದ ಲೋಹದ ವಸ್ತುಗಳಿರುವುದು ಪತ್ತೆಯಾಗಿತ್ತು.

ಎಮ್ಮೆಯು ಗರ್ಭಿಣಿಯಾಗಿದ್ದರಿಂದ ಹಾಗೂ ಪರಿಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಅದರಂತೆ ಡಾ. ನಿಶಾಂತ್ ರಣಾವತ್, ಡಾ. ನವನೀತ್ ಶರ್ಮಾ, ಡಾ. ಶಿಲ್ಪಾ ರಣಾವತ್ ಮತ್ತು ಡಾ. ಸ್ಟೆಫನಿ ಪ್ರಧಾನ್ ಅವರನ್ನೊಳಗೊಂಡ ತಜ್ಞ ವೈದ್ಯರ ತಂಡವು ಯಶಸ್ವಿಯಾಗಿ ಎಮ್ಮೆಯ ಹೊಟ್ಟೆಯಲ್ಲಿದ್ದ ಮೊಳೆಗಳು, ತಂತಿಗಳು ಹಾಗೂ ಸಣ್ಣ ಸಣ್ಣ ಕಬ್ಬಿಣದ ಚೂರುಗಳು ಸೇರಿದಂತೆ ಒಟ್ಟು 66 ಅಪಾಯಕಾರಿ ವಸ್ತುಗಳನ್ನು ಹೊರತೆಗೆದಿದ್ದಾರೆ.

ಒಂದು ವೇಳೆ ಸಕಾಲದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಯದಿದ್ದರೆ, ಆ ಚೂಪಾದ ವಸ್ತುಗಳು ಎಮ್ಮೆಯ ಜಠರ ಹಾಗೂ ಒಳಗಿನ ಇತರೆ ಅಂಗಾಂಗಗಳಿಗೆ ತೀವ್ರ ಹಾನಿ ಉಂಟುಮಾಡಿ ಜೀವಕ್ಕೆ ಕುತ್ತು ತರುತ್ತಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಶಸ್ತ್ರಚಿಕಿತ್ಸೆಯ ನಂತರ ಎಮ್ಮೆ ನೋವಿನಿಂದ ಮುಕ್ತಿ ಪಡೆದಿದ್ದು, ಚೇತರಿಸಿಕೊಳ್ಳುತ್ತಿದೆ. ಇನ್ನು ಮುಂದಿನ ಏಳರಿಂದ ಹತ್ತು ದಿನಗಳ ಕಾಲ ವೈದ್ಯರ ಕಠಿಣ ನಿಗಾದಲ್ಲಿ ಇದಕ್ಕೆ ಚಿಕಿತ್ಸೆ ಮುಂದುವರಿಯಲಿದೆ. ಇದೇ ವೇಳೆ ಪಶುಪಾಲಕರಿಗೆ ಎಚ್ಚರಿಕೆ ನೀಡಿರುವ ವೈದ್ಯರು, ಒಣ ಮೇವು ಹಾಗೂ ಗೋಧಿ ಹುಲ್ಲು ನೀಡುವ ಮುನ್ನ ಅದರಲ್ಲಿ ಮೊಳೆ, ತಂತಿಗಳಂತಹ ಕಬ್ಬಿಣದ ವಸ್ತುಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.