ಬೆಳ್ತಂಗಡಿ : ಬೆಳ್ತಂಗಡಿ ಯುವ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ – ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷ ರಾಜೀನಾಮೆ ?

Advertisement

ಬೆಳ್ತಂಗಡಿ, ಸೆ. 03 : ಬೆಳ್ತಂಗಡಿ ಯುವ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷ ಪ್ರಜ್ವಲ್ ಜೈನ್ ತನ್ನ ಹುದ್ದೆಗೆ ಅದೀಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆನ್ನಾಲಾಗಿರುವ ಪತ್ರವೊಂದು ವೈರಲ್ ಆಗುತ್ತಿದೆ.

ಇಂದು ಯುವ ಕಾಂಗ್ರೆಸ್ ನಾಯಕರಾಗಿ ನವೀನ್ ಸವಣಾಲು ಅವರನ್ನು ನೇಮಕಗೊಳಿಸಿದ ಬಳಿಕ ಭಿನ್ನಮತ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

ಪತ್ರದಲ್ಲೇನಿದೆ ?

ನಾನು ಪ್ರಜ್ವಲ್ ಜೈನ್, ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ವೈಯಕ್ತಿಕ ಹಾಗೂ ಸಂಘಟನಾತ್ಮಕ ಕಾರಣಗಳಿಂದಾಗಿ ಈ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗದ ಕಾರಣ, ನನ್ನ ಯುವಕ ಕಾಂಗ್ರೆಸ್ ನಗರ ಉಪಾಧ್ಯಕ್ಷ ಹುದ್ದೆಗೆ ಈ ಮೂಲಕ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ.

ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನನ್ನ ತತ್ವ, ಆತ್ಮಗೌರವ ಹಾಗೂ ವೈಯಕ್ತಿಕ ನಿಲುವುಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ಹುದ್ದೆಯಲ್ಲಿ ಮುಂದುವರಿಯಲು ನಾನು ಸಿದ್ಧನಿಲ್ಲ. ಹುದ್ದೆಗಿಂತ ನನ್ನ ಸ್ವಾಭಿಮಾನ ಮತ್ತು ತತ್ವಗಳಿಗೆ ನಾನು ಹೆಚ್ಚಿನ ಆದ್ಯತೆ ನೀಡುತ್ತೇನೆ.

ಆದ್ದರಿಂದ ಯಾವುದೇ ಒತ್ತಡ, ವೈಯಕ್ತಿಕ ಲಾಭ ಅಥವಾ ಬೇರೆ ಉದ್ದೇಶವಿಲ್ಲದೆ, ನನ್ನ ಸ್ವತಂತ್ರ ನಿರ್ಧಾರದ ಮೇರೆಗೆ ಈ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ಇಂದಿನಿಂದ ನನ್ನ ಮೇಲಿರುವ ನಗರ ಉಪಾಧ್ಯಕ್ಷ ಹುದ್ದೆಯ ಎಲ್ಲಾ ಜವಾಬ್ದಾರಿಗಳಿಂದ ನನ್ನನ್ನು ಮುಕ್ತಗೊಳಿಸಬೇಕಾಗಿ ವಿನಂತಿಸುತ್ತೇನೆ.

Advertisement
Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ