ಬೆಳ್ತಂಗಡಿ, ಅ. 25 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ, ಬ್ಲಡ್ ಬ್ಯಾಂಕ್, ಮಂಗಳೂರು ಕಣಚೂರು ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ NET ಗ್ರೂಪ್ ಆಪ್ ಇನ್ಸಿಟ್ಯೂಷನ್, ಜೈನ್ ಪೇಟೆ, ಬೆಳ್ತಂಗಡಿ ಸಹಕಾರದೊಂದಿಗೆ “ಬೃಹತ್ ರಕ್ತದಾನ ಶಿಬಿರ ಮತ್ತು ವೈದ್ಯಕೀಯ ಶಿಬಿರ”, ನೇತ್ರ ಚಿಕಿತ್ಸಾ ಶಿಬಿರ । ಉಚಿತ ಕನ್ನಡಕ ವಿತರಣೆ ಗಾಲಿ ಕುರ್ಚಿ ವಿತರಣೆ | ಸಾಂತ್ವಾನ ನಿಧಿ ವಿತರಣೆ ವಾಟರ್ ಬೆಡ್ ವಿತರಣೆ ಕಾರ್ಯಕ್ರಮ ಇಂದು NET ಕಾಲೇಜು ಜೈನ್ ಪೇಟೆ, ಬೆಳ್ತಂಗಡಿಯಲ್ಲಿ ನಡೆಯಿತು.

ಬೃಹತ್ ರಕ್ತದಾನ ಶಿಬಿರ ಮತ್ತು ವೈದ್ಯಕೀಯ ಶಿಬಿರದ ಉದ್ಘಾಟನೆಯನ್ನು ಬೆಳ್ತಂಗಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀ ರಕ್ಷಿತ್ ಶಿವರಾಂ ಉದ್ಘಾಟಿಸಿ, ಶುಭ ಹಾರೈಸಿದರು. ಯುವ ವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು.


ಗಾಲಿ ಕುರ್ಚಿ ವಿತರಣೆ ಮತ್ತು ವಾಟರ್ ಬೆಡ್ ವಿತರಣೆಯನ್ನು ಬೆಳ್ತಂಗಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀ ರಕ್ಷಿತ್ ಶಿವರಾಂ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

