ಅಲ್ಪಾವಧಿಯಲ್ಲಿ ದೊರೆತ ಅವಕಾಶ ಸದ್ಭಳಕೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಬಿ.ಸಿ ನಾಗೇಶ್ – ಹರೀಶ್ ಪೂಂಜ

ಬೆಳ್ತಂಗಡಿ, ಆ. 20 : ಕರ್ನಾಟಕ ಸರಕಾರದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರ ಅಗಲುವಿಕೆಗೆ ಬೆಳ್ತಂಗಡಿ ಶಾಸಕರ ಹರೀಶ್ ಪೂಂಜ ಸಂತಾಪ‌ ಸೂಚಿಸಿದ್ದಾರೆ.

Advertisement

ದಿವಂಗತರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮುಖಂಡರಾಗಿ ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅನನ್ಯವಾಗಿದ್ದು, ಶ್ರೀ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಕರ್ನಾಟಕ ಸರಕಾರದಲ್ಲಿ ಶಿಕ್ಷಣ ಸಚಿವರಾಗಿ ಅವಕಾಶ ದೊರೆತ ಅಲ್ಪಾವಧಿಯಲ್ಲಿ ಅನುಪಮ ಸೇವೆ ಸಲ್ಲಿಸಿದ ಧೀಮಂತ ನಾಯಕ‌ ಬಿಸಿ ನಾಗೆಶ್ ರಾಗಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ‌ ಮೊಟ್ಟ ಮೊದಲು ಕರ್ನಾಟಕದಲ್ಲಿ ಅನುಷ್ಟಾನಗೊಳಿಸಿದ್ದರು. ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣೆ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ವಿವೇಕ ಯೋಜನೆ ದೂರದೃಷ್ಟಿಯ ಯೋಜನೆಯಾಗಿತ್ತು. ಬೆಳ್ತಂಗಡಿ ತಾಲೂಕಿನ 55 ಶಾಲೆಗಳಲ್ಲಿ ಎಂ.ಆರ್.ಪಿ.ಎಲ್ ಸಿಎಸ್ ಆರ್ ನಿಧಿ ಮಂಜೂರುಗೊಳಿಸುವಲ್ಲಿ ದಿವಂಗತರ ಪಾತ್ರ ಮಹತ್ವವಾಗಿತ್ತು.

Advertisement

ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಗೇಶ್ ರ ನಿಧನ ಸಮಾಜಕ್ಕೆ ತುಂಬಲಾಗದ ನಷ್ಟ ದಿವಂಗತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ಶ್ರದ್ಧಾಂಜಲಿ ವ್ಯಕ್ತ ಪಡಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಎಸ್ & ವಿ ಫ್ಯಾಮಿಲಿ ಬ್ಯೂಟಿ ಸೆಲೂನ್ & ಅಕಾಡೆಮಿ ಆ. 23ರಂದು ಶುಭಾರಂಭ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪೂರ್ಣ ವಂದೇ ಮಾತರಂ ಗೀತೆಗೆ ಕಾಂಗ್ರೆಸ್‌ ವಿರೋಧ – ಹೊಸ ಮಸ್ಲಿಂ ಲೀಗ್‌ ಉದಯ ಎಂದ ಬಿಜೆಪಿ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ನಿಡ್ಲೆ ಸೊಸೈಟಿಯಲ್ಲಿ ಅನ್ನಭಾಗ್ಯ ಯೋಜನೆಗೆ ಎರಡು ವರ್ಷದ ಹಿಂದಿನ ಕಳಪೆ ಗುಣಮಟ್ಟದ ಅಕ್ಕಿ – ಬಡವರು ತಿನ್ನೋದು ಹೇಗೆ ಸ್ವಾಮಿ ?

⚠️ Contents are protected on this website.